Latest News :-

Total Business of the Bank has crossed Rs. 149.00 Crores

ಬ್ಯಾಂಕಿನಲ್ಲಿ ಲಭ್ಯವಿರುವ ಸಾಲ ಸೌಲಭ್ಯಗಳು:

ಈ ಕೆಳಗಿನ ಎಲ್ಲಾ ಸಾಲಗಳನ್ನು ಅತ್ಯಂತ ಸರಳವಾಗಿ ಅತಿ ಶೀಘ್ರದಲ್ಲಿ ಬ್ಯಾಂಕಿನ ಸಾಲ ಮತ್ತು ಮುಂಗಡಗಳ ಮಂಜೂರಾತಿ ಹಾಗೂ ವಸೂಲಾತಿ ನಿಯಮಾವಳಿಗಳಂತೆ ಮಂಜೂರು ಮಾಡಲಾಗುವುದು. ಯಾವುದೇ ಸಾಲವನ್ನು ಮಂಜೂರು ಮಾಡುವಾಗ ಅರ್ಜಿದಾರ, ಸಹವರ್ತಿ ಅರ್ಜಿದಾರ ಹಾಗೂ ಜಾಮೀನುದಾರರ ಸಾಲ ಮರುಪಾವತಿ ಸಾಮರ್ಥ್ಯ, ಹಿಂದೆ ಪಡೆದ ಸಾಲಗಳ ಮರುಪಾವತಿ ಇವುಗಳನ್ನು ಗಮನಿಸಿ ಮಂಜೂರು ಮಾಡಲ್ಪಡುತ್ತದೆ. ಯಾವುದೇ ಸಾಲದ ಅರ್ಜಿಯನ್ನು ಪೂರ್ತಿ ಯಾ ಭಾಗಶಃ ಪುರಸ್ಕರಿಸುವ ಯಾ ತಿರಸ್ಕರಿಸುವ ಅಧಿಕಾರವು ಆಡಳಿತ ಮಂಡಳಿಯದ್ದಾಗಿರುತ್ತದೆ. ನಿರಾಕರಣೆಯನ್ನು ಸಹ ಅರ್ಜಿದಾರರಿಗೆ ತಿಳಿಸಲಾಗುದಿಲ್ಲ. ಭದ್ರತಾ ಸಾಲಗಳಿಗೆ ಶೇ. 2.5 ರಷ್ಟು, ಭದ್ರತಾ ರಹಿತ ಸಾಲಗಳಿಗೆ ಶೇ. 5 ರಷ್ಟು ಹೆಚ್ಚುವರಿ ಷೇರುಗಳನ್ನು ಪಡೆಯಲಾಗುತ್ತದೆ.

(ಸೂಚನೆ : ಷೇರು ಒಂದಕ್ಕೆ ರೂ.100/- ರಂತೆ ಗರಿಷ್ಠ 5000/- ಷೇರುಗಳಿಂದ ರೂ. 2,50,000/- ಷೇರು ಮೊಬಲಗನ್ನು ಮಾತ್ರ ಪಡೆಯಬಹುದಾಗಿದೆ. )


ಆಸ್ತಿ ಆಧಾರ ಇತರೆ ಸಾಲ:

ಆಸ್ತಿ ಅಡಮಾನ ಮಾಡಿ ಸಾಲ ಪಡೆಯುವ ಸಮಯದಲ್ಲಿ, ಆಸ್ತಿಯ ದಾಖಲೆ ಪತ್ರಗಳನ್ನು ಬ್ಯಾಂಕಿಗೆ ಅಡಮಾನವಾಗಿ ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಡಬೇಕಾಗಿರುತ್ತದೆ. ಇದಕ್ಕೆ ಸಾಲದ ಮೊತ್ತದ ಶೇ. 0.003 ರಷ್ಟು ನೋಂದಣಿ ಮತ್ತು ಸ್ಟಾಂಪ್ ಶುಲ್ಕವನ್ನು ಭರಿಸಬೇಕಾಗುತ್ತದೆ. ತಮ್ಮ ನಿವೇಶನ ಯಾ ಆಸ್ತಿಯ ಮೌಲ್ಯವನ್ನು ಬ್ಯಾಂಕಿನ ಮೌಲ್ಯ ಮಾಪಕರು ನೀಡಿದ ಮೌಲ್ಯದ ಶೇ. 60 ಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆಸ್ತಿ ದಾಖಲೆ ಪತ್ರಗಳಿಗೆ ವಕೀಲರಿಂದ ಪರಿಶೀಲನಾ ವರದಿಯನ್ನು ಸಹ ಪಡೆಯಲಾಗುವುದು. ಸ್ಥಿರಾಸ್ತಿ ಆಧಾರದ ಸಾಲವನ್ನು ಉದ್ದೇಶಗಳಿಗನುಗುಣವಾಗಿ ನೀಡಲಾಗುವುದು.


ಸ್ಥಿರಾಸ್ತಿ ಆಧಾರದ ಮೇಲೆ ನಿವೇಶನ ಖರೀದಿ/ ಫ್ಲಾಟ್ ಖರೀದಿ/ ಗೃಹ ಖರೀದಿ/ ನಿರ್ಮಾಣ/ ರಿಪೇರಿಗಾಗಿ ಸಾಲ:

ಬ್ಯಾಂಕಿನ ಸದಸ್ಯರಿಗೆ ಮನೆ ಕಟ್ಟಲು/ ಖರೀದಿಸಲು/ ರಿಪೇರಿ ಮಾಡಲು ಸಾಲ ದೊರಯುತ್ತದೆ. ಇದಕ್ಕಾಗಿ ಸಂಬಂಧಿಸಿದ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ನೋಂದಣಿ ಮಾಡಿಸಬೇಕಾಗುತ್ತದೆ. ನಿವೇಶನ ಖರೀದಿಸಿ ಎರಡು ವರ್ಷದ ನಂತರ ಗೃಹ ನಿರ್ಮಾಣಕ್ಕೆ ಸಾಲ ನೀಡಲಾಗುವುದು.


ಸ್ಥಿರಾಸ್ತಿ ಆಧಾರದ ಮೇಲೆ ಇತರೆ ಉದ್ದೇಶಗಳಿಗೆ ಸಾಲ :

ಬ್ಯಾಂಕಿನ ಸದಸ್ಯರು ತಮ್ಮ ಸ್ಥಿರಾಸ್ತಿ ಮೇಲೆ ಇತರೆ ಉದ್ದೇಶಗಲಿಗಾಗಿ ಸಾಲ ಪಡೆಯಬಹುದಾಗಿರುತ್ತದೆ. ಅದರಂತೆ, ಕೈ ಸಾಲ ತಿರುವಳಿಗಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸದಸ್ಯರ ಮಕ್ಕಳ ಮದುವೆಯ ಖರ್ಚಿಗಾಗಿ, ಶಸ್ತ್ರ ಚಿಕೆತ್ಸೆಗಾಗಿ ಸದಸ್ಯರ ಸ್ಥಿರಾಸ್ತಿ ಮೇಲೆ ಸಾಲ ನೀಡಲಾಗುವುದು.


ಸ್ಥಿರಾಸ್ತಿ ಆಧಾರದ ಮೇಲೆ ಮಿರಳೆತ (ಓಡಿ) ಸಾಲ :

ಸಣ್ಣ ವ್ಯಾಪಾರ/ ಕೈಗಾರಿಕೆ ವ್ಯವಹಾರ ವಹಿವಾಟುಗಳನ್ನು ನಡೆಸುವ ಸದಸ್ಯರು ತಮ್ಮ / ಸಂಸ್ಥೆಯ ಹೆಸರಿನಲ್ಲಿರುವ ಅಸ್ತಿ ಮತ್ತು ಯಂತ್ರೋಪಕರಣಗಳನ್ನು ಬ್ಯಾಂಕಿಗೆ ತೋರಾಧಾರ /ಅಡಮಾನ ಮಾಡಿ, ಆ ಯಂತ್ರೋಪಕರಣಗಳ ಮಾರುಕಟ್ಟೆ ಬೆಲೆಯನ್ನಾಧರಿಸಿ, ಬೆಲೆಯ ಶೇ.60 ಕ್ಕೆ ಮೀರದಂತೆ ಸಾಲ ಮಂಜೂರು ಮಾಡಲಾಗುತ್ತದೆ. ಸದರಿ ಬೆಲೆಯನ್ನು ಬ್ಯಾಂಕಿನ ಮೌಲ್ಯ ನಿರ್ಣಯಕಾರರು ನಿರ್ಧರಿಸುತ್ತಾರೆ. ರೂ.1.00 ಲಕ್ಷಕ್ಕೂ ಮೇಲ್ಪಟ್ಟ ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನು ಪಡೆಯಲಾಗುವುದು. ಹೊಸ ಯಂತ್ರೋಪಕರಣಗಳ ಖರೀದಿಗಾಗಿ/ ಅಳವಡಿಕೆ ಸಂದರ್ಭದಲ್ಲಿ ಶೇ. 25 ರ ಅಂತರವನ್ನು (Margin) ಕಾಯ್ದುಕೊಳ್ಳಲಾಗುವುದು.


ವಾಹನ ಸಾಲ :

ಹೊಸ ವಾಹನಗಳನ್ನು ಕೊಳ್ಳಲು ವಾಹನದ ಮಾರುಕಟ್ಟೆ ಬೆಲೆಯ ಶೇ.75 % ರಷ್ಟು ಮೊಬಲಗನ್ನು ಸಾಲದ ರೂಪದಲ್ಲಿ ನೀಡಲಾಗುವುದು. ಉಳಿದ ಮೊಬಲಗನ್ನು ಸಾಲಗಾರರೇ ಭರ್ತಿ ಮಾಡಬೇಕಾಗಿರುತ್ತದೆ. ವಾಹನ ಕೊಳ್ಳುವ ಬಗ್ಗೆ ವಾಹನ ವಿತರಕ ಸಂಸ್ಥೆಯಿಂದ ಬಿಕರಿ (Incoice)ಪಟ್ಟಿಯನ್ನು ಬ್ಯಾಂಕಿಗೆ ಸಾಲದ ಅರ್ಜಿಯೊಂದಿಗೆ ನೀಡಬೇಕಾಗಿರುತ್ತದೆ. ಸಾಲಕ್ಕೆ ಒಬ್ಬ ಜಾಮೀನುದಾರರನ್ನು ನೀಡಬೇಕಾಗಿರುತ್ತದೆ. ವಾಹನದ ಮೊಬಲಗನ್ನು ನೇರವಾಗಿ ವಿತರಕ ಸಂಸ್ಥೆಗೆ ಪಾವತಿ ಮಾಡಲಾಗುತ್ತದೆ. ಹಣ ಪಾವತಿಯ ಬಗ್ಗೆ ಸಂಸ್ಥೆಯಿಂದ ಹಣಸಂದ ರಸೀತಿ, ವಾಹನದ ಕೀ ಮತ್ತು ವಾಹನ ಪಡೆದ ನಂತರ ವಾಹನದ ಆರ್.ಸಿ.ಪುಸ್ತಕದ ಪ್ರತಿ/ ಬಿ ಫಾರಂ, ವಿಮೆ, ಬಿಲ್ಲುಗಳನ್ನು ಬ್ಯಾಂಕಿಗೆ ತಂದು ಕೊಡಬೇಕಾಗಿರುತ್ತದೆ.


ಚಿನ್ನಾಭರಣ ಸಾಲ :

ಬ್ಯಾಂಕಿನ ಸದಸ್ಯರು ತಮ್ಮ ಚಿನ್ನಾಭರಣಗಳನ್ನು ಬ್ಯಾಂಕಿಗೆ ಅಡಮಾನ ಮಾಡುವುದರೊಂದಿಗೆ ಗರಿಷ್ಠ ಸಾಲ ರೂ. 15,00,000/-ದ ವರೆಗೆ ಪಡೆಯಬಹುದಾಗಿದೆ. ಆಭರಣದ ಮಾರುಕಟ್ಟೆ ಬೆಲೆಯ ಮೇಲೆ ಶೇ.60ರ ಗರಿಷ್ಠ ಸಾಲವನ್ನು ಮಾತ್ರ ಮಂಜೂರು ಮಾಡಲಾಗುತ್ತದೆ. ಆಭರಣಗಳ ಮೌಲ್ಯವನ್ನು ಮೌಲ್ಯ ನಿರ್ಣಯಕಾರರಿಂದ ನಿರ್ಧರಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಮರುಪಾವತಿಯ ಗರಿಷ್ಠ ಅವಧಿ 12 ತಿಂಗಳಿಗೆ ಮೀಸಲಾಗಿರಿಸಿದೆ.ಪ್ರತಿ ತಿಂಗಳು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.


ಜಾಮೀನು ಸಾಲ:

ಜಾಮೀನು ಸಾಲವನ್ನು ಒಬ್ಬರು ಯಾ ಹೆಚ್ಚಿನ ಜಾಮೀನುದಾರರ ವೈಯಕ್ತಿಕ ಜವಾಬ್ದಾರಿಗಳ ಮೇಲೆ ನೀಡಲಾಗುತ್ತದೆ. ರೂ. 25,000/- ಗಳ ಮೇಲ್ಪಟ್ಟ ಸಾಲಕ್ಕೆ ಸರ್ಕಾರಿ ಯಾ ಅರೆ ಸರ್ಕಾರಿ ಉದ್ಯೋಗಿಗಳ ಜಾಮೀನು ಅಗತ್ಯವಾಗಿರುತ್ತದೆ.


ಠೇವಣಿ ಆಧಾರ ಸಾಲ :

ಬ್ಯಾಂಕಿನ ಠೇವಣಿದಾರರು ತಮ್ಮ ಯಾವುದೇ ಠೇವಣಿಯನ್ನು ಆಧಾರ ಮಾಡಿ, ಅದರ ಮೇಲೆ ಗರಿಷ್ಠ ಶೇ.85% ರ ವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸಾಲಕ್ಕೆ ಬ್ಯಾಂಕು ಠೇವಣಿಗಳಿಗೆ ನೀಡುವ ಬಡ್ಡಿಗಿಂತ ಶೇ. 1 ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುವುದು. ಈ ಸಾಲದ ಅವಧಿಯು ಠೇವಣಿಯ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಅಥವಾ ಠೇವಣಿದಾರರು ಆ ಮೊದಲು ಕೂಡಾ ಪಾವತಿ ಮಾಡಬಹುದಾಗಿರುತ್ತದೆ.