Latest News :-

Total Business of the Bank has crossed Rs. 149.00 Crores

ಸದಸ್ಯರ ಮಾರಣೋತ್ತರ ನಿಧಿ (99.3.(ಊ ))

  • ಈ ನಿಧಿಯನ್ನು ಪ್ರತಿ ವರ್ಷವೂ ವರ್ಷದ ಲಾಭದಿಂದ ಶೇಕಡಾ 10 ಕ್ಕೆ ಮೀರದಂತೆ ಮೀಸಲಾತಿ ತೆಗೆದಿರಿಸಿ ರಚಿಸತಕ್ಕದ್ದು,
  • ಉಪನಿಯಮಗಳಲ್ಲಿ ಸ್ಪಷ್ಟ ನಿಯಮವಿದ್ದಲ್ಲಿ ದೇಣಿಗೆಗಳಿಂದಲೂ ಈ ನಿಧಿಯನ್ನು ವರ್ಧಿಸಬಹುದು. ಆದರೆ ಮಾರ್ಗ ಸೂಚಿ 10.2 ಮತ್ತು 10.3 ಯೋಜನೆಗಳಂತೆ ಸೃಷ್ಠಿಯಾದ ನಿಧಿಗಳು ಇದ್ದಲ್ಲಿ ಅದನ್ನು ಬೇರೆಯಾಗಿಯೇ ಆಸ್ತಿ ಜವಾಬ್ಧಾರಿಯಲ್ಲಿ ತೋರಿಸತಕ್ಕದ್ದು. ಆ ನಿಧಿಯಿಂದ ಮಾಡತಕ್ಕ ಪಾವತಿಗಳು ಯೋಜನೆಯಲ್ಲಿ ಸೇರಿದವರಿಗೆ ಮಾತ್ರವೇ ಸೀಮಿತವಾಗಿರತಕ್ಕದ್ದು.
  • ಈ ನಿಧಿಯನ್ನು ರಚಿಸಿದ ನಂತರ ಉದ್ದೇಶಿತ ಕಾರ್ಯಕ್ಕೆ ಅಂದರೆ ಸದಸ್ಯರೊಬ್ಬರು ಮರಣ ಹೊಂದಿದ ಸಂದರ್ಭದಲ್ಲಿ ಇದನ್ನು ಉಪಯೋಗಿಸತಕ್ಕದ್ದು.
  • ಬ್ಯಾಂಕಿನಲ್ಲಿ ಸದಸ್ಯರು ಸದಸ್ಯರ ಮರಣೋತ್ತರ ನಿಧಿಯ ಸದಸ್ಯನಾಗಿದ್ದಲ್ಲಿ, ಅಂತಹ ಸದಸ್ಯನು ಮೃತಪಟ್ಟಾಗ ಆ ಸದಸ್ಯನ ಉತ್ತರ ಕ್ರಿಯೆಯ ಖರ್ಚಿಗಾಗಿ, ಆಡಳಿತ ಮಂಡಳಿಯು ಕಾಲಕಾಲಕ್ಕೆ ಅನ್ವಯವಾಗುವ ನಿಗಧಿಪಡಿಸಿದ ಮೊತ್ತವನ್ನು ಸದಸ್ಯರ ಉತ್ತರಾಧಿಕಾರಿಗೆ ಪಾವತಿಸತಕ್ಕದ್ದು
  • ಬ್ಯಾಂಕಿನ ಮತ್ತು ಅದರ ಸದಸ್ಯರೊಳಗೆ ಹಾರ್ದಿಕ ಸಂಬಂಧವನ್ನು ಬೆಳೆಸುವುದು ಕೂಡಾ ಈ ನಿಧಿಯ ಪರೋಕ್ಷ ಉದ್ದೇಶವಾದ ಪ್ರಯುಕ್ತ ಈ ಮೊಬಲಗಿನ ಪಾವತಿಯ ನಿರ್ಧಾರವನ್ನು ಅಧ್ಯಕ್ಷರು ಅಥವಾ ಅವರ ಗೈರು ಹಾಜರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕರು ನೇರವಾಗಿ ಮತ್ತು ಕೂಡಲೇ ತೆಗೆದುಕೊಳ್ಳತಕ್ಕದ್ದು.
  • ಸಾಧ್ಯವಾದಷ್ಟರ ಮಟ್ಟಿಗೆ ಬ್ಯಾಂಕಿನ ಪ್ರತಿನಿಧಿಗಳು, ವಿಷಯ ತಿಳಿದೊಡನೆಯೇ ಗೌರವಪೂರ್ವಕವಾಗಿ ದಿವಂಗತ ಸದಸ್ಯರ ಗಂಡ/ ಹೆಂಡತಿ/ಹಿರಿಯ ಮಗಅಥವಾ ಮಗಳು ಅಥವಾ ಬ್ಯಾಂಕಿನ ದಾಖಲೆಯಲ್ಲಿ ಇರತಕ್ಕ ನಾಮಿನಿ ಇವರಿಗೆ ಅನುಕ್ರಮವಾಗಿ ಈ ಪಾವತಿ ಮಾಡತಕ್ಕದ್ದು.
  • ಬ್ಯಾಂಕಿನಿಂದ ಈ ಪ್ರಕಾರ ಕೊಡತಕ್ಕ ದೇಣಿಗೆಯನ್ನು ನಿರ್ದೇಶಕ ಮಂಡಳಿಯು ನಿರ್ಣಯಿಸತಕ್ಕದ್ದು. ಬ್ಯಾಂಕಿನಲ್ಲಿರತಕ್ಕ ನಿಧಿಯ ಮೊಬಲಗು ಸಾಧಾರಣವಾಗಿ ಒಂದು ವರ್ಷದಲ್ಲಿ ಸರಾಸರಿ ಆಗತಕ್ಕ ಇಂತಹ ದುರ್ಘಟನೆಗಳನ್ನು ಲೆಕ್ಕದಲ್ಲಿಟ್ಟುಕೊಂಡು ಈ ನಿರ್ಣಯವನ್ನು ತೆಗೆದುಕೊಳ್ಳತಕ್ಕದ್ದು.
  • ಒಂದು ಸಲ ತೆಗೆದುಕೊಂಡ ನಿರ್ಣಯವನ್ನು ಕನಿಷ್ಠ 5 ವರ್ಷಗಳವರೆಗೆ ಪುನರ್ವಿಮರ್ಶಿಸತಕ್ಕದ್ದಲ್ಲ.
  • ಸಂದರ್ಭಾನುಸಾರ ಈ ನಿಯಮಗಳನ್ನು ಮಾಡಿದ ಮೇಲೆ, ನಿಧಿಯಲ್ಲಿ ಯಾವುದೇ ಮೊಬಲಗು ಇಲ್ಲದೆ ಇದ್ದಾಗ್ಯೂ ಸಹ ಈ ಪಾವತಿಯನ್ನು ಮಾಡಲೇಬೇಕು ಇಂತಹ ಪಾವತಿಯನ್ನೂ "ನಿಧಿ"ಗೆ ಖರ್ಚು ಹಾಕಿ ಮಾಡಬೇಕು. ಮುಂದಿನ ಲಾಭಂಶ ಹಂಚುವ ವೇಳೆ ಅಥವಾ ಪಾವತಿ ಮಾಡಿದಷ್ಟನ್ನು ಬ್ಯಾಂಕಿನ 'ದೇಣಿಗೆ' ಎಂದು ಲಾಭ-ನಷ್ಟಕ್ಕೆ ಖರ್ಚು ಹಾಕಿ ಸರಿದೂಗಿಸತಕ್ಕದ್ದು ಅಥವಾ ದೇಣಿಗೆಯನ್ನು ವಸೂಲು ಮಾಡುವುದರ ಮೂಲಕವೂ ಇದನ್ನು ತುಂಬಿಕೊಳ್ಳಬಹುದು.
  • ವಿವಿಧ ಯೋಜನೆಗಳಿಗನುಗುಣವಾಗಿ ಸೃಷ್ಠಿಸಿದ ಮರಣೋತ್ತರ ನಿಧಿಗೆ ಸದಸ್ಯರ ದೇಣಿಗೆಯಲ್ಲದೆ ಬೇರೆ ಯಾವುದೇ ಬಡ್ಡಿ ಅಥವಾ ಲಾಭದಿಂದ ಯಾವುದೇ ಸೇರ್ಪಡೆಯೂ ಅಗತಕ್ಕದ್ದಲ್ಲ. ಯೂ ಅಗತಕ್ಕದ್ದಲ್ಲ.